ದೀರ್ಘ ಪಯಣ ಕಲಿಸಿದ ಜೀವನಪಾಠ - 3.5/5 ****
Posted date: 13 Mon, Feb 2023 08:50:14 AM
ನಿರ್ಜನ ಪ್ರದೇಶಗಳಿಗೆ  ಯಾವತ್ತೂ ಒಂಟಿಯಾಗಿ ಹೋಗಬಾರದು ಅನ್ನೋದು ಎಲ್ಲರಿಗೂ ಗೊತ್ತು. ಆದರೂ ಕೆಲವರು ಮತ್ತದೇ ತಪ್ಪನ್ನು ಮಾಡುತ್ತಲೇ ಬರುತ್ತಿದ್ದಾರೆ‌. ಅಂಥದೇ ಒಂದು ಘಟನೆಯನ್ಬಿಟ್ಟುಕೊಂಡು ಥ್ರಿಲ್ಲರ್ ಕಥೆ ‌ಹೆಣೆದಿರುವ ನಿರ್ದೇಶಕ ಶ್ರೀರಾಜ್ ಲಾಂಗ್ ಡ್ರೈವ್ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.  ಪ್ರೀತಿ ಮಾಡುವುದು ಮುಖ್ಯವಲ್ಲ, ಪ್ರೀತಿಸಿದವರನ್ನು‌ ಅಷ್ಟೇ ಜವಾಬ್ದಾರಿಯಿಂದ ನೋಡಿಕೊಳ್ಳುವುದೂ ಮುಖ್ಯವಾಗಿರುತ್ತದೆ ಎಂಬ ಸಂದೇಶ ಹೇಳಿದ್ದಾರೆ,  ತೇಜಸ್ವಿನಿ ಶೇಖರ್  ಹಾಗೂ ನಿರ್ಮಾಪಕ ಶಬರಿ ಮಂಜು ಈ ನಾಲ್ಕು ಪ್ರಮುಖ ಪಾತ್ರಗಳ ಸುತ್ತ 24 ಗಂಟೆಗಳಲ್ಲಿ  ನಡೆಯುವ ಕಥೆ ಇದಾಗಿದ್ದು,

ಚಿತ್ರದ ನಾಯಕಿ ಒಬ್ಬ ಡಾಕ್ಟರ್ (ಸುಪ್ರಿತಾ ಸತ್ಯನಾರಾಯಣ್). ತನ್ನ ಪ್ರಿಯಕರನ(ಅರ್ಜುನ್ ಯೋಗಿ) ಹುಟ್ಟುಹಬ್ಬವನ್ನು  ಸ್ಪೆಷಲ್ ಆಗಿಸಲು ಆತನ ಜೊತೆ ಕಾರಲ್ಲಿ ಹೊರಟು ಲಾಂಗ್ ಡ್ರೈವ್ ಹೋಗೋಣ ಎಂದು ಹೇಳುತ್ತಾಳೆ. ಅವರಿಬ್ಬರೂ ಸಿಟಿಯಿಂದ ಹೊರಟು ಒಂದು ನಿರ್ಜನ ಪ್ರದೇಶಕ್ಕೆ ಬರುವ ಹೊತ್ತಿಗೆ ಕತ್ತಲಾಗುತ್ತದೆ. ಅಲ್ಲೇ ಇದ್ದ ಕಲ್ಲಿನ ಆಸನದಲ್ಲಿ ಇಬ್ಬರೂ ಕುಳಿತು  ರಿಲ್ಯಾಕ್ಸ್  ಮಾಡುವ ಸಮಯದಲ್ಲಿ ಅಲ್ಲಿಗೆ ಬಂದ  ಮಣಿ(ಶಬರಿ ಮಂಜು) ಎಂಬ ಆಗಂತುಕನೊಬ್ಬ ಇವರಿಬ್ಬರೂ ಒಟ್ಟಿಗೇ ಇರುವುದನ್ನು ಮೊಬೈಲ್ ನಲ್ಲಿ ಶೂಟ್ ಮಾಡಿಕೊಳ್ಳುತ್ತ, ಆ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಾಕಿ ಮಾನ ತೆಗೆಯುವುದಾಗಿ ಹೆದರಿಸಿ ಬ್ಲಾಕ್ ಮೇಲ್ ಮಾಡುತ್ತಾನೆ. ಮನೆಯಲ್ಲೂ ಸಹ ದೂರ ಹೋಗುತ್ತೇನೆಂದು  ಹೇಳದೆ ಬಂದಿದ್ದ ನಾಯಕಿ  ಆತನ‌ ಮಾತಿನಿಂದ  ಹೆದರಿ ಬೆಂಡಾಗುತ್ತಾಳೆ. ಇದರಿಂದ ಹೊರಬರಲು ಇಬ್ಬರು ಬಹಳಷ್ಟು ಪರದಾಡುತ್ತಾರೆ. ಕೊನೆಗೆ 1 ಲಕ್ಷ ಹಣ ಕೊಟ್ಟರೆ  ಅ ವಿಡಿಯೋ ಡಿಲೀಟ್ ಮಾಡುವುದಾಗಿ ಮಣಿ ನಾಯಕನಿಗೆ ಹೇಳುತ್ತಾನೆ. ಅದಕ್ಕೊಪ್ಪಿದ ನಾಯಕ  ತನ್ನ  ಮೊಬೈಲ್ ನಿಂದ ಹಣ ಕಳಿಸಲು ಹೋದಾಗ ಮೊಬೈಲ್  ಬ್ಯಾಟರಿ ಖಾಲಿಯಾಗಿರುತ್ತದೆ. ಇವರ ಜೊತೆಗೇ ಬಂದ ಆಗಂತುಕ ಸಾಕಷ್ಟು ಉಪಟಳ ನೀಡುತ್ತಾನೆ. ಕೊನೆಗೆ ಹಣ ಪಡೆದು ಅವರನ್ನ ಬಿಟ್ಟು ಕಳಿಸುತ್ತಾನೆ.  ಆದರೆ ನಾಯಕನ ಪರದಾಟ ನೋಡಿದ ನಾಯಕಿ, ನಾಯಕನಲ್ಲಿ ಧೈರ್ಯವೇ ಇಲ್ಲವೆಂದು ತಪ್ಪಾಗಿ ಅರ್ಥೈಸಿಕೊಂಡು  ನಾನು ಇಡೀ ರಾತ್ರಿ ಒಬ್ಬ ಗಂಡಸಿನ ಜೊತೆ ಬಂದಿಲ್ಲ. ನನ್ನಂತೆ ಪರದಾಡುತ್ತಿರುವ  ಮತ್ತೊಂದು ಹೆಣ್ಣಿನ ಜೊತೆಇದ್ದೆ  ಅನಿಸಿತು ಎಂದು ಆತನನ್ನು  ಅವಮಾನಿಸಿ ಬಿಟ್ಟು ಹೊರಡುತ್ತಾಳೆ. ಇಲ್ಲಿಂದ ಕಥೆ  ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ. ಇವರಿಬ್ಬರಿಗೆ ತೊಂದರೆ ಕೊಟ್ಟ ಮಣಿ,  ಆತನ ಫ್ಯಾಮಿಲಿ ಕಥೆ ಓಪನ್ ಆಗುತ್ತದೆ. ಟ್ರಾವೆಲ್ ಕಂಪನಿ ಓನರ್ ಆದ ಮಣಿಯ ಪತ್ನಿ, ಮಗುವನ್ನು  ನಾಯಕ  ತನ್ನ ಕಾರಲ್ಲಿ ಕರೆದುಕೊಂಡು ಬಂದು ಆತನಿಗೆ ಬುದ್ದಿ ಕಲಿಸುತ್ತಾನೆ. ಕೊನೆಯವರೆಗೂ ನೋಡುಗರನ್ನು  ಭಾವನಾತ್ಮಕವಾಗಿ  ಹಿಡಿದಿಟ್ಟುಕೊಳ್ಳುವ ಲಾಂಗ್ ಡ್ರೈವ್ ಚಿತ್ರವನ್ನು  ಒಮ್ಮೆ ಕಣ್ತುಂಬಿಕೊಳ್ಳಲು  ಅಡ್ಡಿಯೋನಿಲ್ಲ. ಕ್ಯಾಮೆರಾ ವರ್ಕ್ ಮ್ಯೂಸಿಕ್ ಕಥೆಗೆ ಪೂರಕವಾಗಿ ಮೂಡಿಬಂದಿದೆ.

ನಾಯಕ ಅರ್ಜುನ್ ಯೋಗಿ ಎರಡು ಶೇಡ್ ಗಳಲ್ಲಿ ಬರುವ  ತನ್ನ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ನಾಯಕಿ ಸುಪ್ರೀತಾ ಸತ್ಯನಾರಾಯಣ ಕೂಡ ನೈಜ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಇನ್ನು ಇವರಿಗೆ ಕಾಟ ಕೊಡುವ  ಮಣಿಯಾಗಿ ಶಬರಿ ಮಂಜು ಕೂಡ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಇನ್ನು ವಿಕಾಸ್ ವಸಿಷ್ಠ ಅವರ ಸಂಗೀತ ಗಮನ ಸೆಳೆದಿದ್ದು, ಕಿಟ್ಟಿ ಕೌಶಿಕ್ ಅವರ  ಕ್ಯಾಮೆರಾ ಕೈಚಳಕದಲ್ಲಿ ಚಿತ್ರದ ಅಂದ ಇನ್ನೂ ಹೆಚ್ಚಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed